ವಾಸನೆ ಹೊಡೆಯುತ್ತಿರುವ ಪಾತ್ರೆಗಳನ್ನ ಸ್ವಚ್ಛಗೊಳಿಸಲು ನಿಂಬು ಸಿಪ್ಪೆಯನ್ನ ಬಳಸಬಹುದು. ಇದರಲ್ಲಿರುವ ಸಿಟ್ರಿಕ್ ಆಸಿಡ್‌ನಿಂದ ವಾಸನೆಗಳು ಸಂಪೂರ್ಣವಾಗಿ ಹೋಗುತ್ತವೆ. ನಿಂಬೆ ಸಿಪ್ಪೆಯನ್ನ ತೆಗೆದುಕೊಳ್ಳಿ. ಈ ಸಿಪ್ಪೆ ಮತ್ತು ನೀರನ್ನ ವಾಸನೆಯುಳ್ಳ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ. ವಾಸನೆ ಜಾಸ್ತಿಯಿದ್ದರೆ 20-30 ನಿಮಿಷ ಕುದಿಸಬೇಕು. ಬಳಿಕ ನೀರನ್ನು ಚೆಲ್ಲಿ, ಡಿಟರ್ಜಂಟ್‌ನಿಂದ ಚೆನ್ನಾಗಿ ತೊಳೆಯಿರಿ.